Helpo:ಕನ್ನಡ
ಈಡೊ (ಈಡೋವ್) ವಿಕಿಪೀಡಿಯಾಕ್ಕೆ ಸ್ವಾಗತ. ಈಡೋ ಭಾಷೆ ಮೊದಲು ಸುಧಾರಿತ ಎಸ್ಪೆರಾಂಟೋ ಎಂದು ಗುರುತಿಸಲ್ಪಡುತ್ತಿತ್ತು ; ನಂತರ, ಪ್ರಾದ್ಯಾಪಕರು, ಭಾಷಾತಜ್ಞ ರ ಏಳು ವರ್ಷಗಳ ಕಾಲದ ವಿಚಾರ-ವಿಮರ್ಶೆಯ ನಂತರ ಅದು ೧೯೦೭ರಲ್ಲಿ ಸೃಷ್ಟಿಸಲ್ಪಟ್ಟಿತು.ಗಮನಿಸಿ, ಈಡೋ (ಈಡೋವ್) ಭಾಷೆ ಎಸ್ಪರಾಂಟೋ ಭಾಷೆಯನ್ನೇ ಸ್ವಲ್ಪ ಮಟ್ಟಿಗೆ ಹೋಲುತ್ತದೆ; ಆದರೆ ಅದರಲ್ಲಿ ಅನೇಕ ಗಮನಾರ್ಹ ವ್ಯತ್ಯಾಸಗಳು ಇದ್ದು , ಕ್ಯು ಅಕ್ಷರ ಮತ್ತು ಅದೇ ಮೊದಲಾದ ಮತ್ತೆ ಕೆಲವು ಪದಗಳು ಕಾಣುವುದಿಲ್ಲ. ನೀವು ಈಡೊ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದರೆ ಮತ್ತು ವಿಕಿಪೀಡಿಯಾಕ್ಕೆ ಬರೆಯುವ ಅಪೇಕ್ಷೆ ಇದ್ದರೆ, ನಿಶ್ಚಿಂತರಾಗಿ ಬರೆಯಿರಿ ! ನಿಮ್ಮ ಈಡೋ ಬರವಣಿಗೆಯಲ್ಲಿ ತಪ್ಪುಗಳಾದರೆ ಅದನ್ನು ತಿದ್ದಲು/ ಸರಿಪಡಿಸಲು ಇಲ್ಲಿ ಸಂಪಾದಕ ಜನರಿದ್ದಾರೆ. ಅದರ ವ್ಯಾಕರಣ ದೋಷ ,ತಿದ್ದುಪಡಿ , ಅಗತ್ಯವೆಂದು ತೋರಿದಲ್ಲಿ ,ಟೆಂಪ್ಲೇಟ್ ರೆವಿಜೋ ಟ್ಯಾಗ್ (ಕೊಂಡಿ) ನ್ನು ಉಪಯೋಗಿಸಿ . ಈಡೋ ಭಾಷೆಯ ಮುಖ್ಯ ತಾಣ (ಸೈಟ್) ಇಲ್ಲಿ ಕಾಣಬಹುದು , ಈಡೋ ಭಾಷೆಯ ಪ್ರಕಟಣೆಗಳನ್ನು ಇಲ್ಲಿ ಕಾಣಬಹುದು. ಈಡೋ ಬಗ್ಗೆ ಇಂಗ್ಲಿಷ್ ವಿಕಿಪೀಡಿಯಾ ಲೇಖನವನ್ನು ಇಲ್ಲಿ ಕಾಣಬಹುದು. ಇಲ್ಲಿ ಈಡೋ ಭಾಷೆಯ ಎಲ್ಲಾ ತಾಣಗಳ ಪಟ್ಟಿಯನ್ನೂ ಅಂತರಜಾಲದ ತಾಣದಲ್ಲಿ ಕಾಣಬಹುದು. ಮುಖ್ಯವಾಗಿ, ಹೆಚ್ಚು ಪ್ರಸಿದ್ಧವಾದ ಎಸ್ಪೆರಾಂಟೊ ಬದಲು ಈಡೋ ಬಾಷೆಯಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳನ್ನು ಈ (ತಾಣದ) ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸಿದೆ.